ಯಾಕೇ ಹುಡುಗಿ ಇಷ್ಟು ಕಾಡ್ತಿಯಾ...? ತೀರಾ ಇಷ್ಟು ಕಾಡುವಂತದ್ದು ಏನಿದೆ ಗೆಳತಿ ನಿನ್ನಲ್ಲಿ...? ಊರು ಬಿಟ್ಟು ಊರಿಗೆ ಬಂದ್ರೂ ಮಾಸದ ನೆನಪು... ಕಾಡಬೇಕು ಅಂತಾನೇ ಕಂಡ್ಯೇನೋ ಅನ್ನಿಸೋ ಹಾಗೆ ಮಾಡಿಬಿಟ್ಟಿದೆ ನಿನ್ನ ನೆನಪು. ನಿಂಗೊತ್ತಾ...ಕಾಲೇಜಿನ ಮೊದಲದಿನ ಕ್ಲಾಸ್ ರೂಂನಲ್ಲಿ ನೋಡಿಡ್ನಲಾ ಗೆಳತಿ ನಿನ್ನ ಆಗ್ಲೇ 'ಬಿದ್ದೆ'... ಲವ್ವೂ- ಪವ್ವೂ ಏನೂ ಅರ್ಥ ಅಗ್ದಿದ್ರೂ ಒಂದು ರೀತಿಯ ಸೆಳೆತಕ್ಕೆ, ಸಮ್ಮೋಹನಕ್ಕೆ ಒಳಗಾಗಿದ್ದಂತೂ ನಿಜ.ಹೇಳ್ಕಳಕ್ಕೂ ಆಗದ..ಹೇಳದೆ ಇರಲಿಕ್ಕೂ ಆಗದ ಭಾವ. ಒಂದೇ ಒಂದು ದಿನಾನೂ ನಿನ್ನ ನೋಡದೇ ಇರಲಾಗದಂತಹ ಸ್ಥಿತಿ.ನಿನಗೆ ಗೊತ್ತಿರಲಿಕ್ಕಿಲ್ಲ ಹುಡುಗಿ... ಎಷ್ಟೋ ದಿನ ಬಸ್ಸು ಸಿಗದಿದ್ರೂ ೮ ಕಿ.ಮೀ.ನಡೆದೇ ಕಾಲೇಜಿಗೆ ಬರ್ತಾ ಇದ್ದಿದ್ದು ನಿನ್ನ ನೋಡಲೆಂದೇ ಎಂದು...! practical record ಬರಿಯೋ ಅಷ್ಟು ಟೈಮು, ವ್ಯವಧಾನ, source ಎಲ್ಲ ಇದ್ರೂ ಬರಿಯದೆ ಲ್ಯಾಬ್ ನಲ್ಲಿ ನನ್ನ ನೆಚ್ಚಿನ ಮಾಸ್ಟರ್ 'ಸುಬ್ರಾವ್' ಹತ್ರ ಬೈಸಿಕೊಳ್ತಾ ಇದ್ದಿದ್ದು... ಎಲ್ಲಾ ನಿನಗೆ ನೆನಪಿದೆ ಅಂದ್ಕೋತೀನಿ. ಆದ್ರೆ ಯಾಕೆ ಅಂತ ನಿಂಗೆ ಗೊತ್ತಿಲ್ಲಾ ಅಲಾ....? ಅವ್ರು ಬೈದಾಗ ನಿನ್ನ ಮುಖದ ಮೇಲೆ ನಗೂ ಬರ್ತಿತ್ತಲಾ ಆಗ ನೀನು ಎಷ್ಟು ಮುದ್ದಾಗಿ ಕಾಣ್ತಿದ್ದೆ ಗೊತ್ತಾ....ಇನ್ನೂ ಒಂದು ಕಾರಣ ಇದೆ ಗೆಳೆತಿ ಬರೀದೆ ಇರೋದಕ್ಕೆ.... ಬೈಸಿಕೊಂಡು ಆದ ಮೇಲೆ ಲ್ಯಾಬ್ ಮುಗೀತಿತ್ತಲ (ಬೈಸಿಕೊಲ್ದೆ ಲ್ಯಾಬ್ ಮುಗ್ದಿದ್ದೆ ಇಲ್ಲ) ಆಮೇಲೆ ನಿನ್ನ ರೆಕಾರ್ಡ್ ತಗೂಳೋ ಅವಕಾಶದಿಂದ ವಂಚಿತನಾಗಲು ನಾನು ಸುತಾರಾಂ ತಯಾರಿರ್ಲಿಲ್ಲ....ನಿನ್ಕಿಂತಾ ಚೆನ್ನಾಗಿ ರೆಕಾರ್ಡ್ ಬರಿಯೋರಿದ್ರೂ ನಿನ್ ರೆಕಾರ್ಡ್ ನೇ ತಗೋಬೇಕು ಅಂತ ಮನಸ್ಸು ಹಠ ಹಿಡಿದು ಬಿಡ್ತಿತ್ತು ಕಣೇ.....ಅದು ಹೇಗೆ ಮನದ ಮಾತು ಕೇಳದೆ ಇರ್ಲಿ ಹೇಳು... ನಿನ್ನ ಹಾಸ್ಟೆಲ್ ಮುಂದೆ ಹೋಗೋವಾಗ್ಲೆಲ್ಲ ಕಣ್ಣು ನಿನ್ನ ಹುಡುಕ್ತಾ ಇತ್ತು...ಆದ್ರೆ...ನೀನು ಒಂದ್ ದಿನಾನು ಕಾಣಲೇ ಇಲ್ವಲ್ಲಾ...ಯಾಕೆ ಗೆಳೆತಿ.......? ವರ್ಷಕ್ಕೆ ಒಂದು ಸಲದಂತೆ ಮೂರು ವರ್ಷಕ್ಕೆ ಮೂರು ಸಲ ಲೈಬ್ರರಿಗೆ ಹೋದದ್ದು, ಅದೂ ನೀನು ಹೋಗಿದ್ದು ನೋಡಿ ಅಂದ್ರೆ 'ಸರ್'ಗೆ ಸಿಟ್ಟು ಬರಬಹುದು ಗೆಳೆತಿ. ಆದ್ರಿಂದ ಅದೊಂದು ಸತ್ಯ ನನ್ ಹತ್ರಾನೆ ಇರಲಿ. ನೀನು ಎದ್ರಿಗೆ ಇದ್ದಾಗ ಮಾತಾಡೋ ಆಸೇನೆಲ್ಲಾ ಅದುಮಿಟ್ಟೆ...ಆದ್ರೆ ಈಗ ಅವೇ ಆಸೆಗಳು ಒಂದ್ ಕೊರತೆ ಆಗಿ ಕಾಡ್ತಾ ಇದೆಯಲ್ಲಾ ಗೆಳತಿ.....ಮಾತಾಡಲೇ ಬೇಕು ಅನ್ನೋ ಮನಸ್ಸಿನ ಅಸೆ, ಮನೆಯಲ್ಲಿ ಮಾಡಿಕೊಂಡ ಸಂಕಲ್ಪ, ಗೆಳೆಯರು ನೀಡುತಿದ್ದ ಧೈರ್ಯ,ಎಲ್ಲಾನೂ ನಿನ್ನ ಒಂದೇ ಒಂದು ನೋಟ ಕರಗಿಸಿಬಿಡ್ತಿತ್ತಲಾ.....ಏನಿಟ್ಟಿದ್ದೀ ಅಂಥದ್ದು ನಿನ್ನ ಆ ಕಣ್ಣಲ್ಲಿ...? ನಿನಗೆ ಸಿಟ್ಟು ಜಾಸ್ತಿ ಆಲ್ವಾ.....? ಹಾಗೇನೆ ಸೊಕ್ಕು ಕೂಡ.... ಅದೆಂತಹ ಸಿಟ್ಟೇ ಗೆಳತಿ ನಿಂದು..! ಅವತ್ತು ಏನೋ ಅಂದ ಅಂತ ಅವನಿಗೆ ಕ್ಯಾಂಟೀನ್ನಲ್ಲೆ ಎಲ್ಲರ ಎದ್ರಿಗೆ ಬೈದ್ಬಿಟ್ಯಲಾ...ಅದೂ ಒಂದು ಕಾರಣಾನೆ ನಿನ್ನ ಮಾತಾಡಿಸೋ ಅಸೆ ಜೀವಂತವಾಗಿದ್ದೋ ಧೈರ್ಯ ಕೈ ಕೊಡ್ಲಿಕ್ಕೆ. ಶುದ್ಧ ಚಾಮುಂಡಿ ಅವತಾರ...ನೆನಸ್ಕೊಂಡ್ರೆ ಈಗ್ಲೂ ಭಯ ಆಗತ್ತೆ....ಏನಂದ್ರು ಅಷ್ಟು ಸಿಟ್ಟು ಒಳ್ಳೇದಲ್ಲ ಗೆಳತಿ...ನೀನು ನಕ್ಕರೆ ಎಷ್ಟು ಚಂದ ಕಾಣ್ತೀ ಗೊತ್ತಾ.....ಹುಣ್ಣಿಮೆ ಬೆಳದಿಂಗಳ ತಂಪು ಇದೆ ಕಣೆ ನಿನ್ನ ನಗುನಲ್ಲಿ.
ಏನೇ ಅಂದ್ರೂ ನೀನಿನ್ನು ಬರಿ ನೆನಪು ಕಣೇ.... ಮತ್ತೆ ಈಗ ಹೇಗಿದೀಯ.....? ಅಷ್ಟು ಸಿಟ್ಟು...ಸೊಕ್ಕನ್ನ ಕಾಪಾಡಿಕೊಂಡಿದೀಯಾ.....? ಎಷ್ಟು ಕಾಡತ್ತೆ ಗೆಳತಿ ನಿನ್ನ ನೆನಪು....ಈ ನೆನಪೇ ವಿಚಿತ್ರ ಆಲ್ವಾ....ಎಲ್ಲ ಜನರ ಮಧ್ಯೆ ನನ್ನ ಒಂಟಿಯಾಗಿಸತ್ತೆ...ಒಂಟಿ ಆಗೇ ಇದ್ದಾಗ ತುಂಬಾ ಜನರಿರುವ ಭಾವ ಕೊಡತ್ತೆ....anyway thank you ಕಣೇ ನಿಂಗೆ... ಮೂರು ವರ್ಷಾನು ಕಾಲೇಜಿಗೆ ಬರೋ ಹಾಗೆ ಮಾಡಿದ್ದಕ್ಕೆ.....
ಕೀಟ ಜಗತ್ತು
'ಕೀಟ' ಅಂದ ಕೂಡಲೇ ನೆನಪಾಗುವ ಮತ್ತೊಂದು ಪದ 'ಕ್ರಿಮಿ'. ಕ್ರಿಮಿ-ಕೀಟ ಎಂಬ ಜೋಡಿ ಪದ (ಕನ್ನಡ ವ್ಯಾಕರಣದಲ್ಲಿ ಸ್ವಲ್ಪ ವೀಕು) ಎಷ್ಟೋ ಜನರಲ್ಲಿ ಹೇಸಿಗೆ ರೇಜಿಗೆಗಳನ್ನ ಹುಟ್ಟಿಸುಹುದುಂಟು. ಯಾಕಂದ್ರೆ.. ತುಂಬಾ ಮಂದಿಗೆ ಕ್ರಿಮಿ ಅಥವ ಕೀಟ ಎಂದೊಡನೆ ನೆನಪಾಗುಹುದು ಬಚ್ಚಲ ಮನೆಯಲ್ಲಿನ ಜಿರಳೆ, ಸ್ಯೋಯ್ ಎಂದು ಹಾರುತ್ತ ನಿದ್ದೆ ಕೆಡಿಸುವ ಸೊಳ್ಳೆ, ಹೇಸಿಗೆಗಳನ್ನೇ ಆಹಾರವಾಗಿ ತಿನ್ನುವ ನೊಣ... ಇತ್ಯಾದಿ.. ಇತ್ಯಾದಿ.. ಇತ್ಯಾದಿಗಳು. ಎಷ್ಟೋ ಮಂದಿಗೆ ಗೊತ್ತಿರಲಿಕ್ಕಿಲ್ಲ ಪ್ರಪಂಚದಲ್ಲಿ ಸರಿಸುಮಾರು ಒಂದು ಮಿಲಿಯನ್ ಗು ಅಧಿಕ ಕೀಟಗಳನ್ನ ಗುರುತಿಸಿ ನಾಮಕರಣ ನಡೆದಿದೆಯೆಂದೂ ಹಾಗು ಅಷ್ಟೇ ಸಂಖ್ಯೆಯ ಕೀಟಗಳ ಪರಿಚಯ ನಮಗಿನ್ನೂ ಇಲ್ಲವೆಂದೂ...! ಹಾಗೆಯೇ ಅವುಗಳಲ್ಲಿ 'ಮನುಷ್ಯ ಸ್ನೇಹಿ' ಕೀಟಗಳೂ ಇವೆಯೆಂಬುದು ಗೊತ್ತಿರಲಿಕ್ಕಿಲ್ಲ.
'Insecta ' ಅನ್ನೋ classಗೆ ಸೇರುವ ಈ 'insect 'ಗಳು Arthropoda ಎಂಬ phylum ಗೆ ಸೇರಿವೆ.ಅಕಷೇರುಕಗಳಲ್ಲಿ(invertibrates ) ಹಾರಾಡಬಲ್ಲ ಏಕಮಾತ್ರ ವರ್ಗ ಈ ಕೀಟಗಳದ್ದು.
ಕೀಟ ಎಂದೊಡನೆ ನೆನಪಾಗುವ ಜಿರಳೆ, ಸೊಳ್ಳೆ, ನೊಣ, ಗೆದ್ದಲುಗಳನ್ನು ಬಿಟ್ಟು 'ಮಾನವ ಸ್ನೇಹಿ' ಕೀಟಗಳೂ ಉಂಟು ಎಂದೊಡನೆ ಹುಬ್ಬು ಗಂಟಿಕ್ಕಿಕೊಂಡರೆ ಕೀಟಗಳು ಜವಾಬ್ದಾರರಲ್ಲ. ಹೌದು ಸ್ವಾಮಿ....ಎಷ್ಟೋ ಕೀಟಗಳು ಇಲ್ಲ ಅಂದ್ರೆ ನಾವು ಒಂದೋ ಗೆಡ್ಡೆಗಳನ್ನೇ ತಿನ್ನಬೇಕಾಗ್ತಾ ಇತ್ತು... ಇಲ್ಲಾ ಎಲ್ಲಾ ಮನುಷ್ಯ ಮಾಂಸಾಹಾರಿ ಆಗಬೇಕಿತ್ತು. ಈಗ ನಾವು ತಿನ್ನುವ ಎಷ್ಟೋ ಆಹಾರಗಳು ಅಂದ್ರೆ ಅಕ್ಕಿ, ಬೇಳೆ, ತರಕಾರಿ, ಹಣ್ಣು ಎಲ್ಲದರ ತಯಾರಿಕೆಯಲ್ಲಿ ಕೀಟಗಳ ಪಾತ್ರ ಅತಿ ಮುಖ್ಯ. ಮಕರಂದವನ್ನು ಹೀರಲು ಬರುವ ಈ ಜೀವಿಗಳು ಕಾಲಿನಲ್ಲಿ 'ಪರಾಗ' ಹೊತ್ತೊಯ್ದು ಮತ್ತೊಂದು ಹೂವಿನ ಮೇಲೆ ಕೂತು 'ಪರಾಗಸ್ಪರ್ಶ' ಮಾಡುತ್ತವೆ. ಈ ಕ್ರಿಯೆಯಿಂದಲೇ ಹೂವಿಂದ ಹಣ್ಣು...ಹಣ್ಣಿಂದ ಬೀಜ.....
ಜೇನು ನೊಣಗಳು ಮನುಷ್ಯನಿಗೆ ಜೇನು ತುಪ್ಪದ ಮುಲಕ ನೇರವಾಗಿ ಆಹಾರವನ್ನ ಒದಗಿಸುತ್ತವೆ. ಅವೂ ಕೂಡ ಪರಾಗ ಹೊತ್ತೊಯ್ಯುವ ವಾಹನಗಳೇ. ಹಾಗೆಯೇ ಜೀವನಕ್ಕಾಗಿ ಸಾಕುವ 'ರೇಷ್ಮೆ ಹುಳು' ಕೂಡ ಕೀಟವೇ... ಪ್ರತಿಷ್ಠೆಯ ಸಂಕೇತವಾಗಿರುವ 'ರೇಷ್ಮೆ' ಈ ಹುಳುವಿನ ಎಂಜಲು. (Not exactly saliva. Its a secretion of silk gland.ಬಾಯಿಂದ ಬರೋದರಿಂದ 'ಎಂಜಲು' ಎಂಬ ಪದ ಪ್ರಯೋಗವಾಗಿದೆ). ಪರಿಸರದ ಸೊಬಗು ಹೆಚ್ಚಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುವ ಬಣ್ಣ ಬಣ್ಣದ ಚಿಟ್ಟೆಗಳದ್ದು, ಪತಂಗಗಳದ್ದು ಕೂಡ ಇದೆ ವರ್ಗ.
ನಿಮಗೆ ಗೊತ್ತೇನ್ರೀ...ಕೀಟಗಳಲ್ಲೂ ಮಾಂಸಾಹಾರಿ, ಸಸ್ಯಾಹಾರಿ, ಮಿಶ್ರಾಹಾರಿಗಳೂ ಇವೆ. may flies ಮತ್ತು ಕೆಲವು ಪತಂಗಗಳು ಊಟಾನೇ ಮಾಡೋಲ್ವಂತೆ. ದುಂಬಿಗಳು, ಸರಿಸುಮಾರು ಎಲ್ಲ ಚಿಟ್ಟೆಗಳು ಸಸ್ಯಾಹಾರಿಗಳಂತೆ. ಹಾಗೆಯೇ ಕೆಲವು ಪತಂಗದ ಮರಿಗಳು, ಲಾಂಗ್ ಹಾರ್ನೆಡ್ ಗ್ರಾಸ್ ಹಾಪೆರ್ಗಳು, ಡ್ರಾಗನ್ ಫ್ಲೈಸ್ strictly non -vegetarianಗಳು. ಕೆಲ ದುಂಬಿಗಳಿಗೆ, ಗ್ರಾಸ್ ಹಾಪೆರ್ಗಳಿಗೆ ಅದು-ಇದು ಅಂತ ಇಲ್ಲ...veg ಅಂದ್ರೆ veg ... non veg ಅಂದ್ರೆ non veg .
ಇಂತಿಪ್ಪ ಕೀಟಗಳು ಕಂಡ್ರೆ ಹೇಸಿಗೆ ಬೇಡ. ಯಾಕೋ ಲೈಬ್ರರಿಲಿ ತುಂಬಾ ಸೊಳ್ಳೆ ಕಂಡ್ರಿ....ಮುಗಿಸಿಬಿಡ್ತೀನಿ ಬರಿಯೋದನ್ನ....ಇನ್ನೊಮ್ಮೆ ಸೊಳ್ಳೆ ಕಡಿಮೆ ಇದ್ದಾಗ ಸಿಗೋಣ.

ತಾಣ ಪುರಾಣ...
ಹಗಲು ಕನವರಿಸಿದ (ಇದೇನು ಆರಂಭವೇ ತಪ್ಪು ಅಂದ್ಕಂದ್ರಾ....? ಹಾಗೇನಿಲ್ಲ...ನಾವು ಸೂರ್ಯವಂಶದೋರು. ಆದ್ರಿಂದ ಹಗಲೇ ನಿದ್ದೆ ಜಾಸ್ತಿ... ನಿದ್ದೆಯಲ್ಲಿ ಕನವರಿಸೋದೂ ಜಾಸ್ತಿ ಅಷ್ಟೇ) ಮಾತು...ಕನವರಿಸಲೂ ಆಗದ ಮಾತುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ. ಮನಸಿನ ಮಾತನ್ನು ಕಕ್ಕುವ ಪ್ಲಾಸ್ಟಿಕ್ ಕವರ್. ತಲೇಲಿ ಇದ್ದದ್ದನ್ನ ಇದ್ದ ಹಾಗೆ ಯಾವುದೇ ಫಿನಿಷಿಂಗ್ ಇಲ್ದೆ ಇಳಿಸಲು ನಾನೇ ಮಾಡಿಕೊಂಡಿರುವ ವೇದಿಕೆ (ಬ್ಲಾಗ್ ಮಾಡಿಕೊಟ್ಟ ಪ್ರವೀಣನ ಕ್ಷಮೆ ಕೋರಿ). ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ಯಾವುದೇ ಮುಲಾಜಿಲ್ಲದೆ ಬರೆದ್ ಬಿಸಾಕಿ 'comment box' ನಲ್ಲಿ. ಏನಾದ್ರೂ ನಾನು ಬರೆದೂ-ಬರೆದೂ torture ಕೊಡ್ತಿದೀನಿ ಅನ್ಸಿದ್ರೆ...ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ನಡೀತಾ ಇದೆ ಅನ್ಸಿದ್ರೆ... ಓದದೆ ಇರಬಹುದಾದಂತಹ ನಿಮ್ಮ ಸ್ವಾತಂತ್ರ್ಯವನ್ನು ಬಳಸದೆ, ಕಪ್ಪು ಬಾವುಟ ಹಿಡಿಯದೆ ಕಿವಿ ಹಿಂಡಿ, ಬುಧ್ಧಿ ಹೇಳಿ 'ಸಲಹಾ ಪೆಟ್ಟಿಗೆ'ಗೆ ನಿಮ್ಮ ಕೊಡುಗೆ ನೀಡಿ. ಯಾಕಂದ್ರೆ ಕೇವಲ ಅಕ್ಷರ ಮಾಲೆ, ಕಾಗುಣಿತ ಬಿಟ್ಟು ಬರವಣಿಗೆಯ ಯಾವುದೇ ಮಜಲುಗಳನ್ನ ತಿಳಿಯದವ ನಾನು. ಬರೀಲೇ ಬೇಕು ಅನ್ನೊ ಒಂದೇ ಒಂದು 'ಸಂಕಲ್ಪ'ದಿಂದ ಜನ್ಮವೆತ್ತ ಹಸುಗೂಸು ಈ ತಾಣ. ಕಥೆಯೂ ಅಲ್ಲದ..ಕವನವೂ ಅಲ್ಲದ..ಬರವಣಿಗೆಯ ಯಾವುದೇ categoryಗೆ ಸೇರದ ಬರಹಗಳನ್ನ ಸಹಿಸಿಕೊಂಡು ಮುನ್ನಡೆಸಬೇಕಾದ ಜವಾಬ್ದಾರಿಯನ್ನ ನಿಮಗೇ ಬಿಟ್ಟಿದೀನಿ. ಅಪರೂಪಕ್ಕೊಮ್ಮೆಯಾದ್ರೂ ಇಣುಕಿ ನೋಡಿ ಸಹಿಸಿಕೊಂಡು ಸಲಹಬೇಕಾಗಿ ಕಳಕಳಿಯ ಪ್ರಾರ್ಥನೆ.
Subscribe to:
Posts (Atom)